ವಿದ್ಯುತ್ ತಿದ್ದುಪಡಿ ಕಾಯ್ದೆ ಮಸೂದೆ ಜಾರಿಗೆ ತರುವುದು ಬಿಟ್ಟು,ಮೊದಲು ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಿಸಿ: ಏಚ್.ಆರ್. ಬಸವರಾಜಪ್ಪ.

ಶಿವಮೊಗ್ಗ: ರೈತರ, ಗ್ರಾಹಕರ ವಿರೋಧಿ ವಿದ್ಯುತ್ ತಿದ್ದುಪಡಿ ಮಸೂದೆ ಕಾಯ್ದೆಯನ್ನು ಜಾರಿಗೆ ತರಬಾರದು. ಮತ್ತು ಅತೀವೃಷ್ಟಿಯಿಂದಾದ ಹಾನಿಗೆ ತತಕ್ಷಣ ಪರಿಹಾರ ಘೋಷಿಸಬೇಕೆಂದು  ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. 
ರೈತರ, ಜನಸಮಾನ್ಯರ ವಿರೋಧಿ ಕಾಯ್ದೆಯದಂತಹ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ಜಾರಿಗೆ ತರುವುದಿಲ್ಲವೆಂದು ಈ ಹಿಂದೆಯೇ ಕೇಂದ್ರ ಸರಕಾರ ರೈತ ಮುಖಂಡರಿಗೆ ಆಶ್ವಾಸನೆ ಕೊಟ್ಟಿತ್ತು. ಆದರೆ ಈಗ ಲೋಕಸಭೆಯಲ್ಲಿ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಸ್ಥಾಯಿ ಸಮಿತಿಗೆ ಒಪ್ಪಿಸಿ ಮತ್ತೆ ಈ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಕಾಯ್ದೆ ವಿರೋಧಿಸಿ  ಚಳುವಳಿಗಳು ನಡೆಯುತ್ತಿವೆ. ಆದರೂ ಸಹ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಅತೀವೃಷ್ಟಿ ಮಳೆಯಿಂದಾದ ಹಾನಿಗೆ ನಷ್ಟ ಪರಿಹಾರವನ್ನು ತಕ್ಷಣವೇ ಕೊಡಬೇಕು.  ಕಳೆದ ವರ್ಷಗಳಿಗಿಂತ ಈ ವರ್ಷ ಶೇ.40 ಹೆಚ್ಚುವರಿ ಮಳೆಯಾಗಿದ್ದು ಅಪಾರ ಹಾನಿಯಾಗಿದೆ. 150ಜನ, ಸಾವಿರಕ್ಕೂ ಹೆಚ್ಚು ಜಾನುವಾರುಗಳು, 9 ಕೋಟಿ ಹೆಕ್ಟೇರ್ ಪ್ರದೇಶದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸುಮ ಸಂಪೂರ್ಣ ಹಾಳಾಗಿದೆ. ಸುಮಾರು 3,000/-ರೂ. ಕೋಟಿಗೂ ಹೆಚ್ಚಿಗೆ ರೈತರಿಗೆ ಬೆಳೆ ನಷ್ಟವಾಗಿದೆ. ಆದರೂ ಸರ್ಕಾರ ಈವರೆಗೆ ಯಾವುದೇ ಪರಿಹಾರವನ್ನು ವಿತರಣೆ ಮಾಡಿಲ್ಲ ಎಂದು ಹೇಳಿದರು.
 ರೈತರ ಬಹಳಷ್ಟು ಜನರ ಮನೆ ಬಿದ್ದು ಬೀದಿ ಮೇಲೆ, ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ರೈತರು ಹಾಳಾಗಿರುವ ಬೆಳೆಯನ್ನು ತೆಗೆದು ಪುನಃ ಹಿಂಗಾರಿ ಬಿತ್ತನೆ ಮಾಡಲು ರೈತರಲ್ಲಿ ಹಣವಿಲ್ಲ. ಈ ವರ್ಷ ಆಹಾರ ಉತ್ಪಾದನೆಯು ಸಹ ಕಡಿಮೆಯಾಗಿದೆ. ಹೋದ ವರ್ಷ ಬಿದ್ದಂತಹ ಮನೆಗಳಿಗೆ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ ತತಕ್ಷಣ ಜನ ಜಾನುವಾರುಗಳಿಗೆ, ಬೆಳೆ ನಷ್ಟಕ್ಕೆ ಬಿದ್ದ ಮನೆಗಳಿಗೆ ಪರಿಹಾರವನ್ನು ಕೊಡಬೇಕಾಗಿ  ಒತ್ತಾಯಿಸಿದರು.
 ವಿದ್ಯುತ್  ಮಸೂದೆ ತಿದ್ದುಪಡಿ ರೈತರಿಗೆ, ಗ್ರಾಹಕರಿಗೆ ಮರಣ ಶಾಸನವಾಗಿದೆ. ಈ ಮಸೂದೆ ತಿದ್ದುಪಡಿಯಲ್ಲಿ ವಿದ್ಯುತ್ ಪೂರೈಕೆ ಉಪಗುತ್ತಿಗೆ ಹಾಗೂ ಫ್ರಾಂಚಾಯಿಸಿಗೆ ಅವಕಾಶವಿದೆ. ಈ ಮೂಲಕ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುವುದೇ ತಿದ್ದುಪಡಿಯ ಉದ್ದೇಶವಾಗಿದೆ. ಉಚಿತ ವಿದ್ಯುತ್ ಬಂದ್ ಆಗಲಿದೆ. ಗ್ರಾಹಕರು ಮೊದಲು ವಿದ್ಯುತ್ ಶುಲ್ಕ ಪಾವತಿಸಿ ಬಳಿಕ ಸರ್ಕಾರದ ಸಬ್ಸಿಡಿ ಕಾರ್ಯಕ್ರಮದಡಿಯಲ್ಲಿ ಪರಿಹಾರ ನೀಡಿದರೆ ಪಡೆಯಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಏಚ್,ಆರ್,ಬಸವರಾಜಪ್ಪ ತಿಳಿಸಿದರು.

Post a Comment

0 Comments