ಚಿರತೆ ದಾಳಿಗೆ 7 ಕುರಿ 1 ಶ್ವಾನ ಬಲಿ.

ಗದಗ: ಶಿರಹಟ್ಟಿ ತಾಲೂಕು ಕಡಕೊಳ ಗ್ರಾಮದ ಹೊರವಲಯದಲ್ಲಿರುವ ಗೌಳಿಯವರ ಹೊಲದ ಹತ್ತಿರದ ಅರಣ್ಣದ ಅಂಚಿನಲ್ಲಿ ಲಕ್ಷ್ಮಣ್ಣ ಹಾಡಕರ ಎನ್ನುವ ಕುರಿಗಾಯಿ ರವಿವಾರ ರಾತ್ರಿ ಮಳೆ ಯಾಗುವ  ಸಂದರ್ಭದಲ್ಲಿ  ಚಿರತೆಯೊಂದು ದಾಳಿ ಮಾಡಿದ ನಡೆದ ಸಂದರ್ಭದಲ್ಲಿ ಶ್ವಾನ ಬಲಿಯಾಗಿದೆ. ನಂತರ 7 ಕುರಿಗಳ ಮೇಲೆ ಚಿರತೆ ದಾಳಿ ನಡೆಸಿದೆ.
ಕಪ್ಪತ್ತಗುಡ್ಡ ವನ್ಯಜೀವಿ ತಾಣವಾಗಿದೆ.
ಸಾಕುಪ್ರಾಣಿಗಳ ಮೇಲೆ ಕಾಡು ಪ್ರಾಣಿಗಳ ದಾಳಿ ನಡೆಯುತ್ತಲೇ ಇದೆ. ಇದರಿಂದಾಗಿ ಪ್ರಾಣಿ ಸಾಕಿದವರಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ.
 ಇನ್ನು ಕೆಲವೊಮ್ಮೆ ಆಹಾರ ಸಿಗದಿರುವ ಸಂದರ್ಭದಲ್ಲಿ ಕಾಡುಪ್ರಾಣಿಗಳ ದಾಳಿಗೆ ಕುರಿಗಾರರು, ರೈತರು ತುತ್ತಾಗಬಹುದು.
DFO&RFO avary ಇತ್ತ ಕಡೆಗಮನ ಹರಸಬೇಕೆಂಬುದು ಈ ಭಾಗದ ಜನರ ಆಗ್ರಹ.
ತಾಲೂಕಿನ ಅರಣ್ಯಿ ಇಲಾಖೆಯು ಚಿರತೆದಾಳಿಯನ್ನು ನಿರ್ಲಕ್ಷ್ಯ ಮಾಡದೆ ಕುರಿಗಾರರಿಗೆ  ರೈತರಿಗೆ ತಿಳುವಳಿಕೆ ನೀಡಬೇಕು ಸರ್ಕಾರದಿಂದ ಭದ್ರತಾ ಸಲಕರಣೆಗಳನ್ನು ಕೊಡಬೇಕು.ಹಾಗೂ ಚಿರತೆ ದಾಳಿಯಲ್ಲಿ ಸತ್ತಿರುವ ಪ್ರತಿ ಕುರಿಗೆ 15000/ ರೂ  ಪರಿಹಾರವನ್ನು ತಿಂಗಳೊಳಗೆ ಕೊಡಬೇಕು ಎಂದು ಪಟ್ಟಣ ಪಂಚಾಯಿತಿಯ ಸದಸ್ಯರಾದ ಮಂಜುನಾಥ  ಗಂಟಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

Post a Comment

0 Comments