ಸರಕಾರಿ ಪದವಿ ಪೂರ್ವ ನೂತನ ಕಟ್ಟಡ ಉದ್ಘಾಟನೆ


ಬೈಲಹೊಂಗಲ : ಪಟ್ಟಣದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಬುಧವಾರ ಸಂಜೆ ಅದ್ದೂರಿಯಾಗಿ ನಡೆಯಿತು. 

ನೂತನ ಕಟ್ಟಡ ಉದ್ಘಾಟಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಸರಕಾರದ ಪರವಾಗಿ ನಾಚಿಕೆಯಾಗುತ್ತದೆ. 20 ಅಧ್ಯಾಪಕರನ್ನು ಕೊಟ್ಟಿದ್ದೇವಿ. 10 ಜನರನ್ನು ಮಾತ್ರ ಉಪನ್ಯಾಸಕರನ್ನು ಕೊಟ್ಟಿದ್ದೇವೆ. ನನ್ನ ಗ್ರಾಮದ ಕಾಲೇಜು ಚನ್ನಾಗಿ ಆಗಬೇಕು. ಗುಣಮಟ್ಟದ ಶಿಕ್ಷಣ ನೀಡಬೇಕು. ಕೊರತೆ ಇರುವ ಕಡೆ ಅಧ್ಯಾಪಕರ‌ನ್ನು ನೀಡುತ್ತೇನೆ. ಕಟ್ಟಕಡೆಯ ಮಗುವಿಗೂ ಶಿಕ್ಷಣ ನೀಡಬೇಕು. ಮಗು ಸತ್ಪ್ರಜೆಯಾಗಬೇಕೆನ್ನುವ ಸರಕಾರದ ಆಶಯ. ಪೂರ್ಣ ಪ್ರಮಾಣದಲ್ಲಿ ಶಿಕ್ಷಕರನ್ನು ತಗೆದುಕೊಳ್ಳಬೇಕೆಂದರೆ ಶಿಕ್ಷಕರು ಸಿಗುತ್ತಿಲ್ಲ. ಕೋವಿಡ್ ಕಾರಣದಿಂದ ಅಧ್ಯಾಪಕರ ನೇಮಕ ಮಾಡಿಲ್ಲ. ಕೊರತೆ ಇದ್ದಲ್ಲಿ, ಅವಶ್ಯಕತೆ ಬಿದ್ದಲ್ಲಿ ತೆಗೆದುಕೊಳ್ಳುತ್ತೇವಿ. ಮುಂದಿನ ಶಿಕ್ಷಣ ಭಾರತೀಯ ಶಿಕ್ಷಣ ಬದಲಾವಣೆಯಾಗಬೆಕನ್ನೆವು ಮೋದಿ ಅವರ ಕನಸ ಇದೆ. ಆ ಕನಸು ನನಸು ಮಾಡಲು ಶ್ರಮಿಸುತ್ತಿದ್ದೇವೆ. ಭಾರತೀಯ ವ್ಯವಸ್ಥೆಗಳನ್ನು ಮರು ನಿರ್ಮಾಣ ಮಾಡಬೇಕೆನ್ನುವ ಸರಕಾರದ ಆಶಯ ಇದೆ. ಬ್ರಿಟಿಷರು ಹಾಳು ಮಾಡಿದ ವ್ಯವಸ್ಥೆಗಳನ್ನು ಸರಿಮಾಡಬೇಕನ್ನುವ ಆಶಯ ಇದೆ. 23 ಸಾವಿರ ಕೋಟಿ ಶಿಕ್ಷಣದ ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಖರ್ಚು ಮಾಡಲಾಗುತ್ತಿದೆ. ಎಲ್ಲರೂ ಚನ್ನಾಗಿ ಓದಿ, ಸತ್ಪ್ರಜೆಗಳಾಗಿ ಹೊರಹೊಮ್ಮವುದರ ಜೊತೆಗೆ ಭಾರತ ಮಹಾಗುರು ಆಗುವುದರಲ್ಲಿ ಸಂದೇಹವಿಲ್ಲ ವೆಂದರು. ಭಾರತದಲ್ಲಿ ಕೋವಿಡ್ ಗೋಸ್ಕರ ನಮ್ದೆ ಲಸಿಕೆ ತಯಾರಿ ಮಾಡಿದ್ದಾರೆ. ದೇಶದ 108 ಕೋಟಿ ಜನರಿಗೆ ಕ ಉಚಿತ ಲಸಿಕೆ ಮಾಡಿರುವ ಯಾವದಾದರೂ ದೇಶ ಇದ್ದರೆ ಅದು ಭಾರತ ದೇಶ ಮಾತ್ರ. ವಿಜ್ಞಾನದಲ್ಲಿ ಭಾರತ ಮುಂದುವರೆಯುತ್ತಿದೆ. ಕಂಪ್ಯೂಟರ್ ಮನುಷ್ಯನ ಜೀವನದ ಒಂದು ಭಾಗವಾಗಿದೆ. ಎಲ್ಲರಿಗೂ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಲೈಬ್ರರಿ ಬೇಕಂತ ಬೇಡಿಕೆ ಇಟ್ಟಿದ್ದಾರೆ ಖಂಡಿತ್ತಾ ನಮ್ಮ ಇಲಾಖೆಯಿಂದ ಲೈಬ್ರೇರಿ ಮಾಡಲು ಸಹಕರಿಸಲು ಪ್ರಯತ್ನಿಸುತ್ತೇನೆ. 

ಅಧ್ಯಕ್ಷತೆವಹಿಸಿದ್ದ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಕಾಲೇಜ ಅಭಿವೃದ್ಧಿಗಾಗಿ ಅತ್ಯಂತ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ಕೆಲಸಗಳನ್ನು ಬದಿಗೊತ್ತಿ ಕಾಲೇಜ ಕೆಲಸದಲ್ಲಿ ತೊಡಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಅಂಕ, ಫಲಿತಾಂಶದಲ್ಲಿಯೂ ಕೂಡಾ ಮೊದಲನೆ ಸ್ಥಾನ ಇದೆ. ಶಿಕ್ಷಕರ ಕೊರತೆ ಇದೆ. ಮುಂಬರುವ ದಿನಗಳಲ್ಲಿ 20 ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಿ ಕೊಡಬೇಕು. 29 ಕೊಠಡಿಗಳನ್ನು ಮಾಡಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಸುಂದರವಾದ ಮಕ್ಕಳಿಗೆ   ಲೈಬ್ರರಿ ಮಾಡಿಕೊಡಬೇಕೆಂದು ವಿನಂತಿಸಿದೆ. ಪ್ರಾಚಾರ್ಯ ಹಾಗೂ ಸಿಬ್ಬಂದಿಗಳು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಕೆಲ ಸಮಸ್ಯೆಗಳಿಂದ ಇನ್ನೂ ಹೆಚ್ಚಿನ ಮಕ್ಕಳಿಗೆ ಅಡಮಿಶನ್ ನೀಡಲು ಸಾಧ್ಯವಾಗಲಿಲ್ಲ. 3.50 ಲಕ್ಷ, ಜಿ.ಪಂ.ದಿಂದ 1 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಅಧಿಕಾರಿಗಳು 20 ಲಕ್ಷ ಮಂಜರೂ ಮಾಡಿದ್ದಾರೆ ಕಂಪ್ಯೂಟರ್ ಲ್ಯಾಬ್ ಮಾಡಲು ಶ್ರಮಿಸುವುದಾಗಿ ತಿಳಿಸಿದರು. ಇದೇ ವೇಳೆ ದಾನಿಗಳನ್ನು ಸ್ಮರಿಸಿದರು. 
ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಮಹಾವಿದ್ಯಾಲಯ ನೋಡಿದಾಗ ತುಂಬಾ ಖುಷಿಯಾಗುತ್ತಿದೆ. ಇವತ್ತು ತುಂಬಾ ಅಭಿವೃದ್ಧಿಯಾಗಿದೆ. ಮೆರಗು ಬರಲು ಕಾರಣ ಉಪನ್ಯಾಸಕರೇ ಕಾರಣ. ಮಹಾವಿದ್ಯಾಲಯ ಹೆಸರು ಒಮ್ಮೆ ಬರಲು ಸಾದ್ಯವಿಲ್ಲ. ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.  ನಿಮ್ಮ ಇಲಾಖೆಯ ಅನುದಾನ ಬಂದರೆ ಮೊದಲ ಪ್ರಾಶಸ್ತ್ಯ ಬೈಲಹೊಂಗಲಕ್ಕೆ ನೀಡಬೇಕೆಂದರು. 
ಈ ಸಂದರ್ಭದಲ್ಲಿ  ತಹಶಿಲ್ದಾರ ಬಸವರಾಜ ನಾಗರಾಳ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಉಪಾಧ್ಯಕ್ಷೆ ಶಶಿಕಲಾ ಹೊಸಮನಿ, ಬಿಇಓ ಪ್ಯಾಟಿ, ಕಾಲೇಜು ಅಭಿವೃದ್ಧಿ ಸಮೀತಿಯ ಉಪಾಧ್ಯಕ್ಷ ಅಶೋಕ ವಾಲಿ,
ವಿದ್ಯಾರ್ಥಿ ಮುಕ್ತಾ ಹುಡೇದ ಪ್ರಾರ್ಥಿಸಿದರು. ವಿದ್ಯಾರ್ಥಿನೀ ಐಶ್ವರ್ಯಾ ಮರಕುಂಬಿಮಠ ಸ್ವಾಗತಿಸಿದರು.

Post a Comment

0 Comments